0836-2486893 info@walmidharwad.org

ಮೂರುವರೆ ದಶಕಗಳಿಂದ ನಿರಂತರವಾಗಿ ರೈತರಿಗೆ ವೈಜ್ಞಾನಿಕ ನೀರಾವರಿ ಕೃಷಿಯ ತರಬೇತಿ, ನೀರು ಮತ್ತು ನೆಲವನ್ನು ಬಳಸುವ ಸಮಸ್ತ ಫಲಾನುಭವಿಗಳಿಗೆ ನೀರು ಮತ್ತು ನೆಲದ ಸದ್ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ, ಜಲ ನೆಲ ಸಂರಕ್ಷಣೆ ಕುರಿತು ಸಂಶೋಧನೆಗಳನ್ನು ಕೈಗೊಂಡು ಸರಕಾರಕ್ಕೆ ನೀತಿ ನಿಯಮಗಳನ್ನು ರೂಪಿಸಲು ಸಲಹೆಗಳನ್ನು ಒದಗಿಸುತ್ತಾ, ಕರ್ನಾಟಕದ ವಾಲ್ಮಿ ಎಂದೇ ಜನ ಮಾನಸದಲ್ಲಿ ಛಾಪು ಒತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಯು ಇಂದು 35 ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಯ ಪೂರ್ವ ಅಧಿಕಾರಿ ಸಿಬ್ಬಂಧಿಗಳಿಗೆ, ಸರಕಾರಗಳಿಗೆ, ಸಂಸ್ಥೆಯ ಯಾವತ್ತೂ ಹಿತೈಷಿಗಳಿಗೆ, ರೈತ ಬಾಂಧವರಿಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ, ಅಭಿಯಂತರರುಗಳಿಗೆ, ಕನ್ನಡ ನೆಲ ಜಲದ ಕಾಳಜಿಯುಳ್ಳ ಹಿರಿಯರು ಹಾಗೂ ಮಾರ್ಗದರ್ಶಕರಿಗೆ, ನಾಡಿನ ಸಮಸ್ತ ಜನತೆಗೆ ವಾಲ್ಮಿ ಸಂಸ್ಥೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಕೋರುತ್ತಾ ತಮ್ಮೆಲ್ಲರಿಗೂ ವಾಲ್ಮಿಯ 35 ನೇ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ತುಂಬಾ ಹರ್ಷವೆನಿಸುತ್ತದೆ.

ನೆಲ-ಜಲ ಸಂರಕ್ಷಣೆ – ನಮ್ಮ ನಿಮ್ಮೆಲ್ಲರ ಹೊಣೆ

ಡಾ. ರಾಜೇಂದ್ರ ಪೋದ್ದಾರ
ನಿರ್ದೇಶಕರು
ವಾಲ್ಮಿ, ಧಾರವಾಡ